ರಸಪ್ರಶ್ನೆ {QUIZ }
ವಿದ್ಯಾರ್ಥಿಗಳ ಜೀವನದಲ್ಲಿ ಶಾಲೆಯ ಪಾತ್ರ ಮಹತ್ವದ್ದಾಗಿದೆ. ಶಾಲಾ ಶೈಕ್ಷಣಿಕ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ಹಲವಾರು ವಿಧಾನಗಳ ಮೂಲಕ ಕಲಿಯುತ್ತಾರೆ. ತಾವು ಕಲಿತ ಅಂಶಗಳನ್ನು ಹೆಚ್ಚು ಕಾಲ ತಮ್ಮ ಸ್ಮರಣೆಯಲ್ಲಿ ಇಟ್ಟು ಕೊಳ್ಳುವುದು ಅವಶ್ಯಕ.ಈ ದಿಶೆಯಲ್ಲಿ ರಸಪ್ರಶ್ನೆಗಳು ಉತ್ತಮ ಕಲಿಕಾ ಚಟುವಟಿಕೆಗಳಾಗಬಲ್ಲವು. ಅಲ್ಲದೇ ವಿದ್ಯಾರ್ಥಿಗಳು ಆಸಕ್ತಿಯುತವಾಗಿ ಪಾಲ್ಗೊಳ್ಳಲು , ಜೊತೆ-ಜೊತೆಗೆ ಅವರಲ್ಲಿ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಬಲ್ಲವು.
ಈ ನಿಟ್ಟಿನಲ್ಲಿ ರಸಪ್ರಶ್ನೆಗಳನ್ನು ಕೇವಲ ವಿಜ್ಞಾನಕ್ಕೆ ಸೀಮೀತಗೊಳಿಸದೇ ಇತರೇ ಎಲ್ಲಾ ವಿಷಯಗಳಲ್ಲೂ ಅರ್ಥಪೂರ್ಣವಾಗಿ ಆಯೋಜಿಸುವುದು ಒಳಿತು.ಇದರಿಂದ ವಿದ್ಯಾರ್ಥಿಗಳು ಎಲ್ಲಾ ವಿಷಯಗಳನ್ನು ಸಮರ್ಪಕವಾಗಿ ಅರ್ಥೈಸಿಕೊಳ್ಳಲು ಸಹಕಾರಿಯಾಗುವುದು.
ರಸಪ್ರಶ್ನೆಗಳನ್ನು ಸಂದರ್ಭಾನುಸಾರ ,ವಿಷಯವಾರು ,ಮಕ್ಕಳ ಸಾಮರ್ಥ್ಯಾನುಸಾರ ಆಯೋಜಿಸುವುದು. ದೈನಂದಿನ ಶಾಲಾ ಪ್ರಾರ್ಥನೆಯ ವೇಳೆ ರಸಪ್ರಶ್ನೆಗಳನ್ನು ಕೇಳಲು ಮಕ್ಕಳನ್ನು ಪ್ರೇರೇಪಿಸಬೇಕು.ಅಲ್ಲದೆ ವಾರಕೊಮ್ಮೆ,ವಿಶೇಷ ದಿನಾಚರಣೆಯ ಸಂದರ್ಭಗಳಲ್ಲಿ ಸ್ಪರ್ಧೆಯಾಗಿ ಬಳಸಬಹುದು. ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಮಗದಷ್ಟು ಕಟ್ಟಿ ಕೊಳ್ಳಲು ಇವು ಸಹಕಾರಿಯಾಗುತ್ತವೆ. ಈ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದುದು.
- ವಂದನೆಗಳು
* ವಿನಯಕುಮಾರ. ಕೆ.ಆರ್.
ವಿಜ್ಞಾನ ಶಿಕ್ಷಕರು.ಕೆ.ಪಿ.ಎಸ್.ಮಟಮಾರಿ.
No comments:
Post a Comment